ಸಿಲಿಕಾನ್ ಸಿಟಿಯಲ್ಲಿ `ಗೂಗ್ಲಿ` ಸಾಹಸ
Posted date: 30 Sun, Dec 2012 ? 04:43:34 PM

ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸುತ್ತಿರುವ ‘ಗೂಗ್ಲಿ ಚಿತ್ರಕ್ಕೆ ನಗರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.  
ಖಳನಾಯಕನ ಕಡೆಯವರು ನಾಯಕಿಗೆ ತೊಂದರೆ ಕೊಡುತ್ತಿರುತ್ತಾರೆ. ಈ ಸುದ್ದಿ ತಿಳಿದ ನಾಯಕನಿಗು ಖಳನಾಯಕನ ಕಡೆಯವರಿಗೂ ಮಾರಾಮಾರಿಯಾಗುತ್ತದೆ. ಈ ಸಾಹಸ ಸನ್ನಿವೇಶದ ಚಿತ್ರೀಕರಣ ನಗರದ ನಂದಿನಿ ಲೇಔಟ್‌ನಲ್ಲಿ ನಡೆಯಿತು. ಪಳನಿರಾಜ್ ಸಾಹಸ ನಿರ್ದೇಶನ ಮಾಡಿದರು. ಯಶ್, ಕೃತಿಖರಬಂದ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.
ಪವನ್ ಒಡೆಯರ್ ನಿರ್ದೇಶನದ ಈ ಚಿತ್ರಕ್ಕೆ ಬೆಂಗಳೂರು, ಸಕಲೇಶಪುರ, ಮೂಡಬಿದಿರೆ, ಮಂಗಳೂರು ಮುಂತಾದಕಡೆ ನಲವತ್ತು ದಿನಗಳ ಚಿತ್ರೀಕರಣ ನಡೆದಿದೆ. ನಾಲ್ಕು ಹಾಡುಗಳ ಚಿತ್ರೀಕರಣ ಮುಕ್ತಾಯವಾಗಿದ್ದು, ಒಂದು ಹಾಡಿನ ಚಿತ್ರೀಕರಣ ಬಾಕಿಯಿದೆ. ಆ ಹಾಡಿನ ಚಿತ್ರೀಕರಣ ಜನವರಿಯಲ್ಲಿ ಯು.ಎಸ್.ಎನಲ್ಲಿ ನಡೆಯಲಿದೆ.
ವೈದಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜೋಶ್ವಶ್ರೀಧರ್ ಸಂಗೀತ ನೀಡಿದ್ದಾರೆ. ಸನತ್ ಸುರೇಶ್ ಸಂಕಲನ, ಪಳನಿರಾಜ್, ರವಿವರ್ಮ ಸಾಹಸ ನಿರ್ದೇಶನ, ಮುರಳಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಪವನ್ ಒಡೆಯರ್, ಯೋಗರಾಜ್‌ಭಟ್, ಜಯಂತಕಾಯ್ಕಿಣಿ, ಕವಿರಾಜ್ ಬರೆದಿದ್ದಾರೆ. ಯಶ್, ಕೃತಿಖರಬಂದ, ಅನಂನಾಗ್, ಸುಧಾಬೆಳವಾಡಿ, ಸಾಧುಕೋಕಿಲಾ, ನೀನಾಸಂ ಅಶ್ವತ್ ಮುಂತಾದವರು ‘ಗೂಗ್ಲಿ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed